ಜಯನಗರವೆಂಬ ಅದ್ಭುತವಾದ ಲೋಕವು ಆಗಸ್ಟ್ 20, 1948ರಂದು ಪ್ರಾರಂಭವಾಗಿ ಕಳೆದ 75ವರ್ಷಗಳಿಂದ ಬೆಂಗಳೂರಿನ ಅದರಲ್ಲೂ ದಕ್ಷಿಣ ಭಾಗದ ಅತ್ಯಂತ ಸುಂದರ ಸುಪ್ರಸಿದ್ಧ ಮತ್ತು ವಿಶಾಲವಾದ ಬಡಾವಣೆಯಾಗಿ ಈ ಪ್ರದೇಶ ಪರಿವರ್ತನೆಯಾಗಿದ್ದು ಹೇಗೆ?ಸ್ವಾತಂತ್ರö್ಯ ಬಂದ ಒಂದು ವರ್ಷದ ನಂತರ, ಜಯನಗರವು ಆಗಸ್ಟ್ 20, 1948ರಂದು ಜನಿಸಿತು. ಅಂದಿನ ಬೆಂಗಳೂರು ನಗರದ ಹೊಸ ವಿಸ್ತರಣೆಯ ಸಮಾರಂಭದ ಅಧ್ಯಕ್ಷತೆಯನ್ನು ಸಿ. ರಾಜಗೋಪಾಲಾಚಾರಿ ವಹಿಸಿದ್ದರು, ಅವರು ಆಗತಾನೆ ಜೂನ್ 20ರಂದು ಭಾರತದ ಮೊದಲ ಗವರ್ನರ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಮೂಲತಃ ಕನಕನಪಾಳ್ಯ […]
ಭಾರತ ಇಂಗ್ಲೆಡ್ ಸರಣಿ – ರೋಚಕ ಅಂತ್ಯ
ಜುಲೈ 10 ರಿಂದ 14 ರವರೆಗೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ನಲ್ಲಿ ಭಾರತ ಸೋಲು ಅನುಭವಿಸುವ ಮೂಲಕ ನಿರಾಸೆ ಮೂಡಿಸಿದೆ. ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಇಂಗ್ಲೆಂಡ್ 192 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ, ಪಂದ್ಯವನ್ನು ಕೈವಶ ಮಾಡಿಕೊಳ್ಳುವಲ್ಲಿ ಭಾರತ ವಿಫಲವಾಯಿತು. ನಾಲ್ಕನೇ ದಿನದ ಅಂತ್ಯಕ್ಕೆ 54 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ, 170 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಇಂಗ್ಲೆಂಡ್ […]
ಹೇ ಕವನ …….
ನಿನ್ನೆ ನೀನು ನನ್ನ ಕನಸುಇಂದು ನೀನು ಧರಗಿಳಿದ ನನಸುನೀನಿತ್ತ ಆ ಮುಗುಳ್ ನಗೆಯ ಸೊಗಸುಸೋನೆ ಮಳೆಯ ಸದ್ದಿನಂತೆ ಮಿಡಿಯುತಿದೆ ನನ್ನೀ ಮನಸ್ಸುಕಾಡಲಿದೆ ನಿನ್ನಂದದ ಕಣ್ಣಂಚಿನ ಮಿಂಚುನನ್ನೆದೆಗೆ ನಾಟುವ ಮದನ ಬಾಣದ ಅಂಚು…ನೀ ದೂರ ಹೋಗದಿರೆ ನನ್ನೀ ಜೀವದ ಕನಸುನೀ ಬರುವೆಯೇ ನನ್ನೀ ಬದುಕಿಗೆ ಚಿತ್ತಾರವ ಬಿಡಿಸಿಕನಸಿನ ಕಸಿವಿಸಿ ಪರದೆಯ ಸರಸಿನೀ ಬಂದೇ ಬಿಡುವೆ ವಯ್ಯಾರದ ಮಂದ ಗಾಳಿಯ ಹಾಗೇಹುಣ್ಣಿಮೆ ಸಂಭ್ರಮಕೆ ಸಾಗರ ಅಲೆಗಳ ಹೊಯ್ದಾಟದಂತೆಅಲ್ಲೋ ಇಲ್ಲೋ ಎಲ್ಲೋ ನಿನ್ನೀ ಒಡನಾಟದ ಕಾಲ್ಗೆಜ್ಜೆಯ ಸರಿದಾಡಿದ ಸದ್ದಿನಂತೆನೀ ಬರುವೆ ಮುಂಗಾರ […]
ಸರ್ಕಾರದ ಮೀನಾಮೇಷ ಬೆಂಗಳೂರು ಉಪನಗರಗಳ ವರ್ತುಲ ರಸ್ತೆ : ವಿಳಂಬ
ಉದ್ಯಾನನಗರಿ, ಮಾಹಿತಿ ತಂತ್ರಜ್ಞಾನ ನಗರ, ಸಿಲಿಕಾನ್ ಸಿಟಿ ಎಂಬಿತ್ಯಾದಿ ಕೀರ್ತಿಗೆ ಪಾತ್ರವಾಗಿರುವ ನಮ್ಮ ಬೆಂಗಳೂರು ವಿಶ್ವದ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ನಿರೀಕ್ಷೆಗೂ ಮೀರಿದ ಬೆಳವಣಿಗೆಯಿಂದಾಗಿ ಇಡೀ ಜಗತ್ತು ಬೆಂಗಳೂರನ್ನು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ. ಇಲ್ಲಿ ಮೂಲಸೌಕರ್ಯಗಳು ದೇಶ-ವಿದೇಶಗಳ ಉದ್ಯಮಿಗಳನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ವಿಸ್ಮಯನಗರಿ ಬೆಂಗಳೂರಿನ ವೇಗದ ಬೆಳವಣಿಗೆಯು ನಗರದ ಪ್ರಮುಖ ಮೂಲಸೌಕರ್ಯದ ಸಾಮರ್ಥ್ಯವನ್ನು ಮೀರಿ ಬೆಳೆದಿದ್ದು, ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಯು ನಗರದ ಹೊರವಲಯವನ್ನೂ ವಿಸ್ತರಿಸಿ ವ್ಯಾಪಿಸಿದೆ. ಸ್ಯಾಟಲೈಟ್ ಟೌನ್ ರಿಂಗ್‌ರಸ್ತೆ (ಎಸ್‌ಟಿಆರ್‌ಆರ್) ಈಗ ರಿಯಲ್ […]
“ನಿಮ್ಮ ಹೃದಯವು ಒಬ್ಬಂಟಿಯಾಗಿ ಕಾರ್ಯನಿರ್ವಹಿಸುವುದಿಲ್ಲ”
ಜೀವನ ಶೈಲಿಯ ಬದಲಾವಣೆ, ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ ಹಾಗೂ ಆರ್ಥಿಕ ಅಭಿವೃದ್ದಿಯಿಂದ ಕಳೆದ 25 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದ್ರೋಗ ಪ್ರಕರಣಗಳ ಸಂಖ್ಯೆ ಇಮ್ಮಡಿಯಾಗಿದೆ. ಈ ಮಾರಕ ರೋಗಗಳನ್ನು ತಡೆಗಟ್ಟಲು ಕೆಲವು ಸರಳ ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅನುಸರಿಸಿದರೆ, ನಿಮ್ಮ ಅಮೂಲ್ಯ ಮತ್ತು ಅದ್ಭುತ ಅಂಗವಾದ ಹೃದಯ ಆರೋಗ್ಯವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.ನಿಮ್ಮ ಹೃದಯವು ಒಬ್ಬಂಟಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಕಾಲುಗಳಲ್ಲಿ ಇನ್ನೊಂದು ಹೃದಯವೆಂಬ ಪರ್ಯಾಯ ಅಂಗವಿದೆ ಮತ್ತು ಅದನ್ನು ಸೋಲಿಯಸ್ ಎಂದು ಕರೆಯಲಾಗುತ್ತದೆ. ಈ […]
‘ಭಾರತ್ ಬಂದ್’
ವಿವಿಧ ಕಾರ್ಮಿಕ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾರತ್ ಬಂದ್‌ಗೆ ಕರೆ ನೀಡಿರುವ ಪರಿಣಾಮವಾಗಿ ಬ್ಯಾಂಕಿಂಗ್, ಅಂಚೆ ಹಾಗೂ ಇತರ ಕೆಲವು ಸೇವೆಗಳಿಗೆ ಬುಧವಾವ ಅಡಚಣೆ ಉಂಟಾಗುವ ಸಾಧ್ಯತೆ ಇದೆ.ಕೇಂದ್ರ ಸರ್ಕಾರವು ಹಲವು ನೀತಿಗಳನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ.ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕು, ಗುತ್ತಿಗೆ ಪದ್ಧತಿ ಕೊನೆಗೊಳಿಸಬೇಕು, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಕನಿಷ್ಠ ವೇತನವನ್ನು ರೂ.೨೬ ಸಾವಿರಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಸಿಇಟಿಯು, ಐಎನ್‌ಟಿಯುಸಿ […]
ಫುಡ್ ಹ್ಯಾಬಿಟ್ಸ್
ಪರಸ್ಪರ ನಿಶಿದ್ಧ ಆಹಾರ ಎಂದರೇನು ಯಾವ ಆಹಾರಗಳು ಪರಸ್ಪರ ನಿಶಿದ್ಧ, ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ತಿಳಿಯೋಣ. ಆರೋಗ್ಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಇಂದಿಗೂ ನಡೆದುಕೊಂಡು ಬಂದಿರುವ ಪದ್ಧತಿ ಎಂದರೆ ಅದು ಆಯುರ್ವೇದ. ಆಯುರ್ವೇದದ ಪ್ರಕಾರ ವಿರುದ್ಧ ಸ್ವಭಾವವಿರುವ ಆಹಾರ ಪದಾರ್ಥಗಳನ್ನು, ಪರಸ್ಪರ ನಿಶಿದ್ಧ, ಅಂದರೆ ವಿರುದ್ಧ ಆಹಾರ ಎಂದು ಕರೆಯುತ್ತಾರೆ, ಈ ಆಹಾರಗಳನ್ನು ಸೇವಿಸಬೇಕಿದ್ದರೆ, ರುಚಿಯಾಗಿದ್ದರೂ, ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜೀರ್ಣಶಕ್ತಿ ಕಡಿಮೆಯಾಗಿ. ಜಠರದ ಸಮಸ್ಯೆಗೂ ಕಾರಣ ಆಗುತ್ತವೆ. ಹೊರಗಿನ ವಾತಾವರಣದಲ್ಲಿ ಬೆಂಕಿ […]
ವರ್ತುಲ ರೈಲ್ವೆ – ೨೫೦೦ ಎಕರೆ ಭೂಸ್ವಾಧೀನ
ಬೆಂಗಳೂರು ಸುತ್ತಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ವರ್ತುಲ ರೈಲ್ವೆ ಯೋಜನೆಗೆ 2500 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಕೇಂದ್ರ ರೈಲ್ವೆ ಇಲಾಖೆಯು ಭೂಮಿ ನೀಡಿದವರಿಗೆ ಪರಿಹಾರ ನೀಡಲಿದೆ. ಈ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಪಟ್ಟಣಗಳನ್ನು ರೈಲು ಸಂಪರ್ಕದ ಮೂಲಕ ಬೆಸೆಯಲಿದ್ದು, 287 ಕಿ.ಮೀ. ವಿಸ್ತೀರ್ಣ ಹೊಂದಿರಲಿದೆ. ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ವರ್ತುಲ ರೈಲ್ವೆ ಯೋಜನೆಗೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ 2500 ಎಕರೆ ಭೂಸ್ವಾಧೀನ. ಭೂಮಿ […]
ಜಿಎಸ್‌ಟಿ ನೋಟಿಸ್ ಮತ್ತು ಬೆಂಗಳೂರು ಬಂದ್
ಯುಪಿಐ ಮೂಲಕ ವರ್ಷವೊಂದರಲ್ಲಿ ರೂ.40 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿದ ಬೇಕರಿ, ಹೋಟೆಲ್, ಬೀಡಾ ಅಂಗಡಿ, ಟೀ-ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ಈಚೆಗೆ ನೋಟಿಸ್ ನೀಡಿದ್ದು, ರಾಜ್ಯದಲ್ಲಿ ಯುಪಿಐ ಮೂಲಕ ಹಣ ಪಡೆಯುತ್ತಿರುವ ಸುಮಾರು 65000 ವರ್ತಕರ ಮಾಹಿತಿಯನ್ನು ಯುಪಿಐ ಪ್ಲಾಟ್‌ಫಾರ್ಮ್ಗಳಿಂದ ವಾಣಿಜ್ಯತೆರಿಗೆ ಇಲಾಖೆ ಪಡೆದುಕೊಂಡಿತ್ತು. ಎಲ್ಲರೂ ಜಿಎಸ್‌ಟಿಗೆ ನೋಂದಾಯಿಸಿ ಎಂದು ಸೂಚಿಸಿತ್ತು. ಆದರೆ ಮುಕ್ಕಾಲು ಭಾಗ ಸಣ್ಣ ವರ್ತಕರು ಬೇಕರಿ, ಪಾನ್ ಶಾಪ್, ಟೀ ಸ್ಟಾಲ್‌ನವರು ಈ ಮೂರು ವರ್ಷವು ತೆರಿಗೆ ಕಟ್ಟುವಲ್ಲಿ ನಿರ್ಲಕ್ಷಿಸಿದ್ದರು.‘ಆರ್ಥಿಕ […]
ಭೂಸ್ವಾಧೀನ ರದ್ದು ದೇವನಹಳ್ಳಿ ರೈತರ ಪ್ರತಿಭಟನೆಗೆ ಜಯ
ನೇಗಿಲ ಯೋಗಿಗಳ ಹೋರಾಟಕ್ಕೆ ಮಣಿದ ಸರ್ಕಾರ : ಭೂಸ್ವಾಧೀನ ಕೈ ಬಿಟ್ಟ ರಾಜ್ಯ ಸರ್ಕಾರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ಗಾಗಿ ಜಮೀನು ನೀಡಲು ರೈತರು ಭಾರೀ ಪ್ರತಿಭಟನೆ ನಡೆಸಿ ಅಮರಣಾಂತ ಉಪವಾಸದೊಂದಿಗೆ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಡಲು ನಿರ್ಧರಿಸಿದೆ. ಈ ಮೂಲಕ ಕಳೆದ ಮೂರುವರೆ ವರ್ಷಗಳಿಂದ ನಡೆದಿರುವ ರೈತರ ಹೋರಾಟ ತಾರ್ಕಿಕ ಅಂತ್ಯಕಂಡಿದ್ದು, ಅನ್ನದಾತರ ಆಂದೋಲನಕ್ಕೆ ದೊಡ್ಡ ಗೆಲುವು ಲಭಿಸಿದೆ. ಈ ಹಿನ್ನೆಲೆಯಲ್ಲಿ […]








